ಹಾಸನದ ಸಂಗಾತಿಗಳಿಗೆ ಪ್ರೀತಿಯ ವಂದನೆಗಳು.. ಸೆಪ್ಟೆಂಬರ್ 8 ರಂದು ಅರಿವಿನ ಪಯಣದ ಉದ್ಘಾಟನೆ ಆಗಿ, 9 ಸಾಯಂಕಾಲದ ಹೊತ್ತಿಗೆ, 6 ಅರಿವಿನ ಪಯಣದ ಕಾರ್ಯಕ್ರಮ ಗಳು ನಡೆದವು. ಒಂದೊಂದು ಕಾರ್ಯಕ್ರಮವೂ ಒಂದೊಂದು ಅನುಭವ. ಕೊನೆಯ ಕಾರ್ಯಕ್ರಮ ಬಾಲಭವನದಲ್ಲಿ ನಡೆದಿತ್ತು. ಅಲ್ಲಿಯ ಮಕ್ಕಳ ಅನುಭವವೇ ಅನನ್ಯ.
ಬದುಕಿನ ಕಟು ವಾಸ್ತವಗಳು ಪುಟ್ಟ ಮಕ್ಕಳ ಬಾಯಿಂದ ಕೇಳಿಸಿಕೊಂಡೆವು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಜೊತೆಗೆ ಇದ್ದು, ಮಕ್ಕಳ ಹತ್ತಿರ ಮಾತಾಡಿದರು. ರೂಪಾ ಹಾಸನ, ವಿ ಗೀತಾ, ಡಾ.ಸಾವಿತ್ರಿ, ಮುಂತಾದವರು ಇದ್ದು ಮಕ್ಕಳ ಜೊತೆಗೆ ಸಂವಾದ ನಡೆಯಿತು. ಹಾಸನದಲ್ಲಿ ಯುವ ಕಲಾತಂಡವೊಂದು ರೂಪುಗೊಳ್ಳುತ್ತಾ ಇರುವುದು ಸಂತೋಷದ ವಿಚಾರ. ಅತ್ಯಂತ ಉತ್ಸಾಹ, ಪ್ರೀತಿಯಿಂದ ಪ್ರದರ್ಶನಗಳಲ್ಲಿ ಭಾಗಿಯಾದರು...ಅರಿವಿನ ಪಯಣವನ್ನು ಭರದಿಂದ ಮುಂದುವರಿಸಲು ಇನ್ನೂ ಒಂದೆರಡು ತಂಡಗಳ ಅಗತ್ಯವಿದೆ. ಈ ಬಾರಿ ರಾಜ್ಯ ಸಮಿತಿಯಿಂದ ಬಂದವರು -ಸಬಿಹಾ, ಆರ್. ಸುನಂದಮ್ಮ, ವಾಣಿ, ರೇಖಾಂಬ, ಗೌರಿ, ಅಖಿಲಾ - ಭಾನುಮತಿಯವರ ಮನೆಯಲ್ಲಿ ಆರಾಮವಾಗಿ ಇದ್ದೆವು. ಅವರ ಪ್ರೀತಿಯ ಆದರಾತಿಥ್ಯಗಳಿಗೆ ಮನದುಂಬಿ ಶರಣು.. ಸಂಘಟನೆ ಮಾಡಿದ ಶಾಡ್ರಾಕ್, ಮಾದಕ ವ್ಯಸನ ನಾಟಕ ನಿರ್ದೇಶಿಸಿದ ಉಮೇಶ್..., ಸಂಭ್ರಮದಿಂದ ಜೊತೆಗೆ ನಿಲ್ಲುವ ರೂಪಾ ಹಾಸನ, ಅಕ್ಕರೆ..ಕಾಳಜಿಯಿಂದ ನೋಡಿಕೊಳ್ಳುವ ವೆಂಕಟೇಶಣ್ಣ ಎಲ್ಲರಿಗೂ ಮನದುಂಬಿ ಶರಣು.