ಮಂಗಳೂರು - ೨೦೧೩

ಮಂಗಳೂರು - ೨೦೧೩

13ರಲ್ಲಿ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಬಿಡಿಬಿಡಿಯಾಗಿ ಮಹಿಳಾ ಸಂಘಟನೆಗಳು ಸ್ಥಳೀಯವಾಗಿ ನಡೆಸುವ ಮಹಿಳಾ ದಿನಾಚರಣೆಗಳ ಅರಿವು ಅನುಭವಗಳು ಏಕಕಾಲದಲ್ಲಿ ಎಲ್ಲರಿಗೂ ಸಂವಹನಗೊಳ್ಳುವುದು ಸಾಧ್ಯವಿರಲಿಲ್ಲ.

ಸಂಘಟನೆಗಳೆಲ್ಲ ಒಟ್ಟಾಗಿ ಸೇರಿ ಮಹಿಳಾ ದಿನಾಚರಣೆಯನ್ನು ಆಚರಿಸುವುದು, ಲಿಂಗಸೂಕ್ಷ್ಮತೆ ಕಾರ್ಯಾಗಾರ ನಡೆಸುವುದು, ಜಾಥಾ ಮೌನಜಾಗೃತಿ ನಡೆಸುವುದು, ಬೃಹತ್ ಸಮಾವೇಶಕ್ಕೆ ಹಲವರು ಕೈಜೋಡಿಸಿ ತಯಾರಿ ನಡೆಸುವುದೇ ಮೊದಲಾದ ಕ್ರಿಯೆಗಳಿಂದ ಏರ್ಪಡುವ ಸೋದರಿತ್ವ ಮತ್ತು ಸ್ನೇಹಜಾಲ ಇಂದಿಗೆ ಅವಶ್ಯ. ಗರಿಷ್ಠ ಪ್ರಮಾಣದ ಸಂವಹನ ಸಾಧ್ಯತೆಯಿಂದಾಗಿ ಹೋರಾಟದ ಅನುಭವ ಲೋಕ ಮತ್ತೂ ವಿಶಾಲಗೊಂಡು ಬಹುಮುಖಿ ಚಿಂತನೆಗಳನ್ನೊಳಗೊಳ್ಳಲು ಇದರಿಂದ ಸಾಧ್ಯವಾಗಬಲ್ಲದೆಂಬ ಹಿರಿಯಾಸೆ ಈ ಒಕ್ಕೂಟದ್ದು.

  • ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮತ್ತು ಮಹಿಳಾ ಸಂಘಗಳ ಜಾಲದ ಆಶ್ರಯದಲ್ಲಿ ಮೊದಲ ಸಮಾವೇಶ. `ಇನ್ನು ಸಾಕು’ ಘೋಷವಾಕ್ಯ.
  • ಮಾರ್ಚ್ 7-ವಿಚಾರ ಸಂಕಿರಣ-ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸಾಮಾಜಿಕ ನೆಲೆಗಳು, ಜಾತಿಯ ನೆಲೆ, ಕೌಟುಂಬಿಕ ನೆಲೆ, ಕೆಲಸದ ಸ್ಥಳ/ ಸಾರ್ವಜನಿಕ ಸ್ಥಳ, ಪೊಲೀಸ್/ ನ್ಯಾಯಾಂಗ ವ್ಯವಸ್ಥೆ ಕುರಿತು ಚರ್ಚೆ ನಡೆಯಿತು.
  • ಮುಖ್ಯ ಭಾಷಣಕಾರರಾಗಿ ಪ್ರಸಿದ್ಧ ಮರಾಠಿ ಲೇಖಕಿ ಹಾಗೂ ದಲಿತ ಚಳುವಳಿಗಾರರು ಆದ ಶ್ರೀಮತಿ ಊರ್ಮಿಳಾ ಪವಾರ್ ಪಾಲ್ಗೊಂಡರು.

ಮಾರ್ಚ್ 6, 2013

ಮಹಿಳಾ ಕೇಂದ್ರಿತ ಚಲನಚಿತ್ರ ಪ್ರದರ್ಶನ- ಬೆಳಿಗ್ಗೆ 11 ರಿಂದ ಸೈಂಟ್ ಆಗ್ನೆಸ್ ಕಾಲೇಜು ಮತ್ತು ಮಧ್ಯಾಹ್ನ 2ರಿಂದ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳÀಗಂಗೋತ್ರಿ.

ಸಂಜೆ 4.30- ‘ಕಪ್ಪು ಉಡುಪಿನಲ್ಲಿ ಮಹಿಳೆಯರು’ ಹಂಪನಕಟ್ಟೆ ಸಿಗ್ನಲ್ ವೃತ್ತ

ಬೆಂಗಳೂರಿನ `ವಿಮೋಚನಾ’ದ ಮಧು ಭೂಷಣ್ ಮತ್ತು ಶಾಂತಮ್ಮನವರು ನಡೆಸಿಕೊಟ್ಟರು.

300 ಕ್ಕೂ ಅಧಿಕ ಮಂದಿ ಸ್ಥಳೀಯ ಸಮಸ್ಯೆಗಳನ್ನು ಬಿಂಬಿಸುವ ಪ್ಲಕಾರ್ಡ್‍ಗಳನ್ನು ಹಿಡಿದು ಭಾಗವಹಿಸಿದರು.

ಮಾರ್ಚ್ 8, 2013

ಮೆರವಣಿಗೆ- ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಕರಾವಳಿ ಉತ್ಸವ ಮೈದಾನದವರೆಗೆ

ಬಹಿರಂಗ ಸಮಾವೇಶ-ಕರಾವಳಿ ಉತ್ಸವ ಮೈದಾನದಲ್ಲಿ

ಅತಿಥಿಗಳಾಗಿ ವಿಶಾಖ ಗೈಡ್‍ಲೈನ್ಸ್‍ನ ಕಾರಣ ಕರ್ತರಾದ ಶ್ರೀಮತಿ ಬಾಂವ್ರಿದೇವಿ, ಖ್ಯಾತ ಲೇಖಕಿ ವೈದೇಹಿ ಮತ್ತು ಹಾಲಕ್ಕಿ ಒಕ್ಕಲಿಗರ ಸಂಘದ ಸುಕ್ರಿ ಬೊಮ್ಮಗೌಡ ಪಾಲ್ಗೊಂಡರು.

ಸುಮಾರು ಐದು ಸಾವಿರ ಮಂದಿ ಒಟ್ಟು ಸೇರಿದ ಈ ಸಮಾವೇಶ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು.

  • ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮತ್ತು ಮಹಿಳಾ ಸಂಘಗಳ ಜಾಲದ ಆಶ್ರಯದಲ್ಲಿ ಮೊದಲ ಸಮಾವೇಶ. `ಇನ್ನು ಸಾಕು’ ಘೋಷವಾಕ್ಯ.
  • ಮಾರ್ಚ್ 7-ವಿಚಾರ ಸಂಕಿರಣ-ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸಾಮಾಜಿಕ ನೆಲೆಗಳು, ಜಾತಿಯ ನೆಲೆ, ಕೌಟುಂಬಿಕ ನೆಲೆ, ಕೆಲಸದ ಸ್ಥಳ/ ಸಾರ್ವಜನಿಕ ಸ್ಥಳ, ಪೊಲೀಸ್/ ನ್ಯಾಯಾಂಗ ವ್ಯವಸ್ಥೆ ಕುರಿತು ಚರ್ಚೆ ನಡೆಯಿತು.
  • ಮುಖ್ಯ ಭಾಷಣಕಾರರಾಗಿ ಪ್ರಸಿದ್ಧ ಮರಾಠಿ ಲೇಖಕಿ ಹಾಗೂ ದಲಿತ ಚಳುವಳಿಗಾರರು ಆದ ಶ್ರೀಮತಿ ಊರ್ಮಿಳಾ ಪವಾರ್ ಪಾಲ್ಗೊಂಡರು.

single-img-six

ಮಂಗಳೂರು - ೨೦೧೩

ತಿಟ್ಟಗಳು: ಮಂಗಳೂರು - ೨೦೧೩