ನಮ್ಮ ಮಗಳು ಜಗದ ಬೆಳಕು,ನಮ್ಮ ದೇಹ ನಮ್ಮ ಹಕ್ಕು ಘೋಷವಾಕ್ಯದೊಂದಿಗೆ ಸಿದ್ಧತೆ ಶುರು.
ವಿಚಾರ ಗೋಷ್ಠಿ:ಉದ್ಘಾಟನೆ ಮತ್ತು ದಿಕ್ಸೂಚಿ ಮಾತು: ರಂಜನಾ ಪಾಡಿ, ಒರಿಸ್ಸಾ ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆ ಮತ್ತು ರೈತ ಮಹಿಳೆ
ದೀಪದಿಂದ ದೀಪ ಹಚ್ಚಿ............ಮೌನ ಜಾಗೃತಿ ೫.೩೦ ರಿಂದ ೬.೩೦ರವರೆಗೆ- ‘ಬಿಳಿಯುಡುಪಿನಲ್ಲಿ ನಾವು, ಮೌನಜಾಗೃತಿ, ಅಶೋಕ ಸರ್ಕಲ್, ಕೊಪ್ಪಳ
ಮಾರ್ಚ್ 9, 2017- ಹಕ್ಕೊತ್ತಾಯ ಜಾಥಾ ಮತ್ತು ಬೃಹತ್ ಸಾರ್ವಜನಿಕ ಸಮಾವೇಶ ಬೆಳಿಗ್ಗೆ 11 ಘಂಟೆಗೆ, ಗವಿಸಿದ್ಧೇಶ್ವರ ಮಠದ ಆವರಣದಿಂದ, ಜಾಥಾ ಉದ್ಘಾಟನೆ: ಗೋಗು ಶ್ಯಾಮಲ, ಖ್ಯಾತ ತೆಲುಗು ಲೇಖಕಿ ಬಹಿರಂಗ ಸಾರ್ವಜನಿಕ ಸಭೆ-ಮಧ್ಯಾಹ್ನ 2.00, ಪಬ್ಲಿಕ್ ಗ್ರೌಂಡ್ ಕವಿತಾ ಕೃಷ್ಣನ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ, ದೆಹಲಿ.
-
ಕೊಪ್ಪಳ ಮಹಿಳಾ ದಿನಾಚರಣೆಯ ವೈಶಿಷ್ಟ್ಯ-
ವ್ಯವಸ್ಥಿತವಾದ, ವ್ಯಾಪಕವಾದ ‘ಅರಿವಿನ ಪಯಣ ಕಾರ್ಯಕ್ರಮಗಳು
-
ಎಲ್ಲ ಸೂಕ್ಷ್ಮಜ್ಞರ ಪ್ರಶ್ನೆ
ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯವನ್ನು ವಿರೋಧಿಸುವ, ಪ್ರಶ್ನಿಸುವ ಮನೋಭಾವವನ್ನು ಜಗತ್ತಿನಾದ್ಯಂತ ಹಲವರು ಹೊಂದಿದ್ದೂ ಇಂದಿಗೂ ಇದು ಕಡಿಮೆಯಾಗದೇ ಇರುವುದರ ಹಿಂದೆ ಕೆಲಸ ಮಾಡುತ್ತಿರುವ ಸಂಗತಿ ಯಾವುದು?
-
ಕಣ್ಣೆದುರೇ ಪುಟ್ಟ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗುತ್ತಿರುವಾಗಲೂ ಕಣ್ಣುಮುಚ್ಚಿಕೊಂಡು ಕುಳಿತು ಏನೂ ಆಗುತ್ತಿಲ್ಲ ಎಂಬ ಸುಳ್ಳು ಲೋಕದಲ್ಲಿ ಕಳೆದುಹೋಗಬೇಕೇ?
-
ಅಥವಾ ಹೆಣ್ಣುಮಕ್ಕಳೆಲ್ಲ ಸಂಘಟಿತರಾಗಿ ನಿರಂತರ ಚಳುವಳಿಗಳಲ್ಲಿ ತೊಡಗಿಸಿಕೊಳ್ಳಬೇಕೇ? ಅಥವಾ ಇದರಾಚೆಗೂ ಕೆಲವು ದಾರಿಗಳನ್ನು ಹುಡುಕಿಕೊಳ್ಳಬೇಕೇ?
-
ಈ ಹಿನ್ನೆಲೆಯಲ್ಲಿ ಮೊದಲ ಹೆಜ್ಜೆ- ನಾವು ತಲುಪಬೇಕಿರುವುದು ಯಾರನ್ನು ಎಂಬ ಸ್ಪಷ್ಟತೆ
-
ಜಾಗೃತಿಯ ಕೊರತೆ ಖಂಡಿತ ನಮ್ಮ ಜನ ಮಾನಸದಲ್ಲಿ ಇದೆ. ಇದೂ ಕೂಡ ಪುರುಷಾಧಿಕಾರ ಪರ ಯೋಚನೆಗಳು ಆಳವಾಗಿ ಬೇರು ಬಿಡಲು ಕಾರಣ.
ಕೊಪ್ಪಳದಿಂದ ಹೊರಟು ಶಿವಮೊಗ್ಗ, ಧಾರವಾಡಕೆ ಸಾಗಿದ ಅರಿವಿನ ಪಯಣ
-
ಇದಕ್ಕಾಗಿ ಸರಿಯಾದ ವಿಚಾರಗಳನ್ನು ತಲುಪಿಸಲು ರೂಪುಗೊಂಡ ಯೋಜನೆ-ಅರಿವಿನ ಪಯಣ
-
ನಾವು ಮೊದಲು ತಲುಪಬೇಕಾಗಿರುವುದು ಹೈಸ್ಕೂಲು ಹಂತದಲ್ಲಿ ಓದುತ್ತಿರುವ ಮಕ್ಕಳನ್ನು
ಜೊತೆ ಜೊತೆಗೇ ಪಿ.ಯು.ಸಿ ಹಾಗೂ ಕಾಲೇಜು ಮಕ್ಕಳನ್ನೂ ಭೇಟಿಯಾಗುವುದು
-
ಕಿರುನಾಟಕಗಳು, ಚಿಕ್ಕ ವಿಡಿಯೋಗಳು, ಅರಿವಿನ ಹಾಡುಗಳು, ಚರ್ಚೆ, ಸಂವಾದಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ
-
ಪ್ರತಿ ತಾಲೂಕಿನಲ್ಲಿಯೂ `ಬಿಳಿಯುಡುಪಿನಲ್ಲಿ ಮಹಿಳೆಯರು’ ಕಾರ್ಯಕ್ರಮ ನಡೆಸಲಾಯಿತು.
-
ಕೊಪ್ಪಳದ ತಾಲೂಕುಗಳಲ್ಲಿ ಸಂಜೆ ಹೊತ್ತು ಒಂದು ತಾಸು ಪಟ್ಟಣದ ಪ್ರಮುಖ ವೃತ್ತದಲ್ಲಿ ಮಹಿಳೆಯರು ಮೇಣದಬತ್ತಿ ಹಿಡಿದು ನಿಂತು ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯ ವಿರೋಧಿಸುತ್ತ ಸಮಾನತೆ, ಸ್ವಾತಂತ್ರ್ಯ, ಘನತೆಯ ಬದುಕಿನ ಹಕ್ಕುಗಳನ್ನು ಪ್ರತಿಪಾದಿಸಿದರು.