ಕೋಲಾರದ ‘ಆದಿಮದಲ್ಲಿ ಅಧ್ಯಯನ ಶಿಬಿರ ಜನವರಿ ೨೩, ೨೪, ೨೫ರಂದು.
ಮಾರ್ಚ್ ಮಹಿಳಾ ದಿನಾಚರಣೆ ರೂಪುರೇಷೆ, ದಿನಾಂಕ ಕುರಿತು ಕೋಲಾರದ ಸಂಗಾತಿಗಳೊಡನೆ ಮಾತುಕತೆ.
-
ಮಂಡ್ಯದಲ್ಲಿ ಗಿಡ ಪಡೆದ ಕೋಲಾರ ಸೋದರ ಸೋದರಿಯರ ಬಳಗ.
-
ಕೋವಿಡ್ ಆತಂಕದ ನಡುವೆಯೂ ಸಭೆ ಸೇರಿ ಸೆಪ್ಟೆಂಬರಿನಿಂದ ವೆಬಿನಾರ್ಗಳನ್ನು ಆಯೋಜಿಸಲಾಗಿದೆ.
-
ಅಕ್ಟೋಬರ್ 2ರಂದು ಗಾಂಧಿ ಜಯಂತಿ ಹಾಗೂ ಅರಿವಿನ ಪಯಣ ಉದ್ಘಾಟನೆಯಾಗಿದೆ.
-
ಹತ್ರಾಸ್ ಅತ್ಯಾಚಾರ ವಿರೋಧಿಸಿ, ಕೋಲಾರದಲ್ಲಿ ಒಂದಾದಮೇಲೊಂದು ಸಂಭವಿಸಿದ ದೌರ್ಜನ್ಯ ವಿರೋಧಿಸಿ ಸಹಭಾಗಿ ಸಂಘಟನೆ-ವ್ಯಕ್ತಿಗಳೊಂದಿಗೆ ಪ್ರತಿಭಟನೆ.
-
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಜನವರಿ 23 ಮತ್ತು 24 ರಂದು ಕೋಲಾರದ 'ಆದಿಮ'ದಲ್ಲಿ ನಡೆದ ಅಧ್ಯಯನ ಶಿಬಿರದ ಒಂದು ಸಣ್ಣ ವರದಿ...
-
ಈ ಎರಡು ದಿನ ನಡೆದ ಶಿಬಿರದಲ್ಲಿ ಶಿವಮೊಗ್ಗದಿಂದ ನಾವು ಐದು ಸದಸ್ಯರು, ಅಂದರೆ, ನಾನು, ವೃಂದ ಹೆಗಡೆ, ರೇಖಾಂಬ, ಭಾಗೀರಥಿ, ಸವಿತಾ ಬನ್ನಾಡಿ
ಭಾಗವಹಿಸಿದ್ದೆವು. ಎಲ್ಲ ಜಿಲ್ಲೆಯಿಂದ ಸೇರಿ ಒಟ್ಟು ಸುಮಾರು ಮೂವತೈದು ಸದಸ್ಯರು ಭಾಗವಹಿಸಿದ್ದರು.
-
ದಿನಾಂಕ 23/01/2021 ರಂದು
ಬೆಳಗ್ಗೆ 09.00 ರಿಂದ 10.00 ಬೆಳಗಿನ ಉಪಾಹಾರ
-
10. 00 - 11.00-
ದೀಪಕ್ ಅವರು ಗುಂಪು ಚಟುವಟಿಕೆ ಮಾಡಿಸಿದರು.
ನಂತರ ಶಭಾನ, ಮೈಸೂರು ಇವರು ಒಕ್ಕೂಟದ ಸಂವಿಧಾನವನ್ನು ಓದುವುದರ ಮೂಲಕ ಶಿಬಿರದ ಮೊದಲ ಗೋಷ್ಠಿ ಆರಂಭವಾಯಿತು.
-
11.00 AM - 01.30 PM
ವಿ. ಗಾಯಿತ್ರಿ ಯವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಕೃಷಿ ಕಾಯ್ದೆಗಳಾದ ಮಂಡಿ APMC ಬೈ ಪಾಸ್ ಕಾಯ್ದೆ, ಒಪ್ಪಂದ ಕೃಷಿ ಕಾಯ್ದೆ, ಅಗತ್ಯ ಕೃಷಿ ಕಾಯ್ದೆ, ಕರ್ನಾಟಕ ಭೂ ಸುಧಾರಣಾ ಕಾಯಿದೆ ಹಾಗು ಕಾರ್ಮಿಕ ಕಾಯಿದೆಗಳು ನಮ್ಮ ರೈತರಿಗೆ ಹಾಗೂ ಕಾರ್ಮಿಕರಿಗೆ ಹೇಗೆ ಸಂಪೂರ್ಣವಾಗಿ ಮಾರಕವಾಗಿವೆ ಎಂದು ವಿವರವಾಗಿ ತಿಳಿಸಿದರು.
-
ಕನಿಷ್ಠ ಬೆಂಬಲ ಬೆಲೆಯನ್ನು ಸಹ ನೀಡದೆ ಇರುವುದರಿಂದ ಹಾಗು ಕೃಷಿ ಉತ್ಪನ್ನಗಳ ಯಾರು ಬೇಕಾದರು ಯಾವುದೇ ನಿರ್ಭಂದಗಳಿಲ್ಲದೆ ಕೊಳ್ಳಲು, ಮಾರಟ ಮಾಡಲು ಸಂಗ್ರಹ ಮಾಡಲು ಅವಕಾಶ ನೀಡುವುದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳ ಮೇಲಿನ ಒಡೆತನವನ್ನು ಸಹ ಕಳೆದುಕೊಳ್ಳುವುದಲ್ಲದೆ ರೈತರು ಕಾರ್ಪೋರೇಟ್ ಕಂಪನಿಗಳ, ಖಾಸಗಿ ದಲ್ಲಾಳಿಗಳ ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಕಾರ್ಮಿಕ ಕಾಯಿದೆ ಜಾರಿಗೆ ತಂದರೆ ಕಾರ್ಮಿಕರು ಕೆಲಸಕ್ಕಾಗಿಯೆ ದಿನದ ಹೆಚ್ಚಿನ ಸಮಯ ಮತ್ತು ಶ್ರಮ ವ್ಯಯಿಸಬೇಕಾಗುತ್ತದೆಯಲ್ಲದೆ ಕಾರ್ಮಿಕರಿಗೆ
ಯಾವುದೆ ಉದ್ಯೋಗ ಭದ್ರತೆ ಇರುವುದಿಲ್ಲ ಎಂಬುದನ್ನು ನಮಗೆ ಮನವರಿಕೆ ಮಾಡಿಕೊಟ್ಟರು.
-
1.30 ರಿಂದ 2.30 ಮಧ್ಯಾಹ್ನ ಊಟ
ಮಧ್ಯಾನ್ಹ 2.30 - 4.00-
ದು. ಸರಸ್ವತಿಯವರ ನೇತೃತ್ವದಲ್ಲಿ ಮಹಿಳಾ ದೌರ್ಜನ್ಯದ ಕುರಿತು ಚರ್ಚಿಸಲಾಯಿತು. ಹೊಟ್ಟೆ ಪಾಡಿಗಾಗಿ ದುಡಿಯಲು ವಲಸೆ ಹೋಗುವ ಹೆಣ್ಣು ಮಕ್ಕಳ ಮೇಲೆ ಆಗುವ ಲೈಂಗಿಕ, ಆರ್ಥಿಕ ಶೋಷಣೆ ಹಾಗು ವಲಸೆ ಕಾರ್ಮಿಕರ ಬದುಕಿಗೆ ಉದ್ಯೋಗ ಖಾತ್ರಿ ಯೋಜನೆಯಂತಹ ಸೌಲಭ್ಯಗಳನ್ನು ನೀಡಿದರೆ ಆದಷ್ಟು ಇಂಥಹ ದೌರ್ಜನ್ಯವನ್ನು ತಡೆಗಟ್ಟಬಹುದೆಂದು ಹಾಗು ಇದಲ್ಲದೆ ಇಡೀ ಕುಟುಂಬದಲ್ಲಿ ಹೆಣ್ಣಿನ ಪಾತ್ರದ ಕುರಿತು ಚರ್ಚಿಸಲಾಯಿತು.
-
ಸಂಜೆ 5.00 ರಿಂದ 6.30-
ಕೊರೋನ ಕಾಲದ ಪ್ರತಿಯೊಬ್ಬರ ವೈಯಕ್ತಿಕ ತಲ್ಲಣ, ವೃತ್ತಿ ಜೀವನದಲ್ಲಿನ ಏರುಪೇರು, ಸಾಮಾಜಿಕ ಅನುಭವವನ್ನು ಅಲ್ಲಿನ ಮೂವರು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸೂಚಿಸಿದರು. ಕೊನೆಯಲ್ಲಿ ಎಲ್ಲರ ಅನುಭವವನ್ನು ಒಟ್ಟಾರೆಯಾಗಿ ಹಂಚಿಕೊಂಡು, ಕೊರೋನ ಕಾಲದ ಸಂಕಷ್ಟವನ್ನು ಗ್ರಹಿಸಿದೆವು.
-
ಇಳಿಸಂಜೆ 7.00 ರಿಂದ 8.30-
ಅಧಿಕಾರ, ರಚನೆ, ನಿರಸನೆಯ ಕುರಿತಾದ ಚರ್ಚೆಯನ್ನು ದೀಪಕ್, ವಾಣಿ, ಸರಸ್ವತಿಯವರು ನಡೆಸಿದರು. ಎಲ್ಲರನ್ನೂ ಐದು ಗುಂಪುಗಳಾಗಿ ಮಾಡಿ ನಮ್ಮ ವೃತ್ತಿ, ಮತ್ತು ಸಾಮಾಜಿಕ ನೆಲೆಯಲ್ಲಿ ಅಧಿಕಾರ ಎನ್ನುವುದು ಹೇಗೆ ತನ್ನ ಪ್ರಭಾವ ಬೀರುತ್ತದೆ, ನಮ್ಮ ವೈಯಕ್ತಿಕ ಅನುಭವದ ನೆಲೆಯಲ್ಲಿ ಅಧಿಕಾರದ ಕುರಿತಾದ ನಮ್ಮ ವಿಚಾರಗಳೇನು ಎಂಬುದನ್ನು ಎಲ್ಲರೊಂದಿಗೆ ಹಂಚಿಕೊಂಡು ದಾಖಲಿಸಿದೆವು. ಹಾಗೆ ಅಧಿಕಾರ ಎನ್ನುವುದು ಗಂಡಸರಿಗೆ ಸುಲಭವಾಗಿ ಸಿಗುತ್ತದೆ ಅದು ಅವರ ಹಕ್ಕು ಎಂದು ಸಹ ಭಾವಿಸಲಾಗಿದೆ. ಆದರೆ ಮಹಿಳೆಯರು
ಅಧಿಕಾರವನ್ನು ಪಡೆದುಕೊಳ್ಳುವುದಕ್ಕು ಹಾಗೆ ಅದನ್ನು ಸರಿದೂಗಿಸಿಕೊಂಡು ಹೋಗುವ ಪ್ರತಿ ಹಂತದಲ್ಲು ಹೋರಾಟ ಮಾಡುಬೇಕಾಗುತ್ತದೆ. ಅಲ್ಲದೆ ಅಧಿಕಾರದ ರಚನಾತ್ಮಕ ಒತ್ತಡವನ್ನು ಕಡಿಮೆ ಮಾಡಲು ಸಂವಹನ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿದುಕೊಂಡೆವು.
-
ಈ ದಿನ ಬೆಳಗ್ಗೆ ಕ್ಯಾಂಪಸ್ ವಾಕ್ ಮಾಡಲಾಯಿತು. ಎಲ್ಲರೂ ಆದಿಮದ ಸುತ್ತ ಇದ್ದ ಬೆಟ್ಟವನ್ನು ಹತ್ತಿದೆವು. ಬೆಟ್ಟದ ದಾರಿಯಲ್ಲಿ ನಮಗೆ ವಿಶೇಷ ಎನಿಸುವ ಯಾವುದಾದರು ವಸ್ತುಗಳನ್ನು ಆಯ್ದುಕೊಂಡು ಬರಲು ಹಾಗು ಬುದ್ಧ ನಡಿಗೆ ನಡೆಯಲು ಸೂಚನೆ ನೀಡಲಾಗಿತ್ತು. ಕೋಲಾರದ ಕಲ್ಲು ಬೆಟ್ಟಗಳ ವಿಹಂಗಮ ನೋಟವನ್ನೂ ಬೆಳಗಿನ ಚಳಿಯನ್ನೂ ಅನುಭವಿಸಿದೆವು.
-
9.00 ಗಂಟೆಗೆ ಬೆಳಗಿನ ಉಪಾಹಾರ.
9.30 ಕ್ಕೆ ಕೋಟಿಗಾನಹಳ್ಳಿ ರಾಮಯ್ಯನವರ ಮನೆಗೆ ಹೋದೆವು. ಅವರು ಜನಪದ ಕಥೆಗಳ ಮೂಲಕ ಅವರ ಹಾಡುಗಳ ಮೂಲಕ ಕೋಲಾರದ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆಗಳ ಬಗ್ಗೆ ತಿಳಿಸಿದರು. ದಲಿತ ಚಳುವಳಿ ಸಂಘಟನೆಗಳ ಕುರಿತು ಅವರ ಅನುಭವಗಳನ್ನು ಹಂಚಿಕೊಂಡರು. ನಾರಾಯಣಸ್ವಾಮಿಯವರು ರಾಮಯ್ಯನವರ ರಚನೆಯ ಹಾಡುಗಳನ್ನು ಏಕತಾರಿಯ ಶೃತಿಲಯಗಳೊಂದಿಗೆ ಹಾಡಿದರು.
-
ನಡು ಮಧ್ಯಾನ್ಹ 12.00 ಗಂಟೆಗೆ ಆದಿಮಕ್ಕೆ ಮರಳಿ ಬಂದೆವು. 12.00 ರಿಂದ 1.30
ಮಹಿಳಾ ಕಾವ್ಯ ಸಂವೇದನೆಗಳ ಕುರಿತು ಸಬಿಹಾ ಮೇಡಂ ಮಾತನಾಡಿದರು. ಹಾಗು ಕಾವ್ಯ ವಾಚನ ನಡೆಸಲಾಯಿತು.
-
ಕೊನೆಯಲ್ಲಿ ಎಲ್ಲರು ಆದಿಮದಲ್ಲಿನ ಎರಡು ದಿನಗಳ ಅನುಭವವನ್ನು ಹಾಗು ಮುಂದೆ ಆಗಬೇಕಿರುವ ಸುಧಾರಣೆಗಳ ಕುರಿತ ನಮ್ಮ ಅನಿಸಿಕೆಯನ್ನು ಬರೆದು ದಾಖಲಿಸಿದೆವು.
-
1.30 ರಿಂದ 2.30 ಮಧ್ಯಾಹ್ನ ಊಟ
-
03. 00 ರಿಂದ 05.00
ಮಧ್ಯಾಹ್ನ ಊಟದ ನಂತರ ಕೋಲಾರಕ್ಕೆ ತೆರಳಿ ಅಲ್ಲಿ ಕೋಲಾರದ ಸಂಗತಿಗಳ ಜೊತೆಗೆ ಮಾರ್ಚ್ 8 ರ ಮಹಿಳಾ ದಿನಾಚರಣೆಗೆ ರೂಪುರೇಷೆ ಸಿದ್ಧಪಡಿಸಿ, ಊಟ ವಸತಿ ಸಭಾ ಕಾರ್ಯಕ್ರಮಗಳ ಜವಾಬ್ದಾರಿಯನ್ನು
ಹಂಚಿಕೊಳ್ಳಲಾಯಿತು.
-
ಎರಡು ದಿನದ ಶಿಬಿರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ಕಾಯಿದೆಗಳ ಕುರಿತು, ವಲಸೆ ಮಹಿಳಾ ಕಾರ್ಮಿಕರು, ಕೋಲಾರದ ಸಾಂಸ್ಕೃತಿಕ, ದಲಿತ ಹೋರಾಟ ಪರಂಪರೆ ಕುರಿತು,
ವಿವಿಧ ಜಿಲ್ಲೆಯಿಂದ ಬಂದ ಒಕ್ಕೂಟದ ಸದಸ್ಯರು ನೊಂದ ಮಹಿಳೆಯರಿಗೆ, ಅಲೆಮಾರಿ ಸಮುದಾಯಗಳಿಗೆ ಅವರ ಹಕ್ಕು ಮೂಲಭೂತ ಸೌಲಭ್ಯಗಳನ್ನು ಕೊಡಿಸಲು ತಾವು ನಡೆಸಿದ ಹೋರಾಟಗಳನ್ನು ಕುರಿತು, ಸರ್ಕಾರದ ಹಾಗು ಅಧಿಕಾರಿಗಳ ನಿರ್ಲಕ್ಷ್ಯ, ಅದನ್ನು ಎದುರಿಸಿದ ತಮ್ಮ ಅನುಭವಗಳನ್ನು ಕುರಿತು ಚರ್ಚೆ ನಡೆಯಿತು.
-
ಒಟ್ಟಾರೆಯಾಗಿ ಎರಡು ದಿನದ ಶಿಬಿರ ಯಶಸ್ವಿಯಾಗಿ ನಡೆಯಿತು. ಹಾಗು ಒಕ್ಕೂಟದ ಸದಸ್ಯರ ನಡುವಿನ ಬಾಂಧವ್ಯವನ್ನು ಸಹ ಹೆಚ್ಚಿಸಿತು.
-ಪವಿತ್ರಾ ಜಿ ಆರ್, ಸಾಗರ