ಸುದ್ದಿಗಳು

೨೦೨೪, ಮಾರ್ಚ್‌ ೯ ರಂದು ಉಡುಪಿಯಲ್ಲಿ ಹಕ್ಕೊತ್ತಾಯ ಜಾಥಾ ಮತ್ತು ಬೃಹತ್‌ ಸಾರ್ವಜನಿಕ ಸಮಾವೇಶ

ಒಕ್ಕೂಟವು ಉಡುಪಿಯಲ್ಲಿ ೨೦೨೪ರ ಮಾರ್ಚ್‌ ೯ ರಂದು ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಜಾಥಾ ಮತ್ತು ಬೃಹತ್‌ ಸಾರ್ವಜನಿಕ ಸಮಾವೇಶ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಜಾಥಾ ಮತ್ತು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದವರು ಆಂಧ್ರಪ್ರದೇಶದ ಸಿಕಂದರಾಬಾದ್‌ನ ಡಾ.ಜಿ ವಿ ವೆನ್ನೆಲಾ ಗದ್ದರ್‌. ಉಡುಪಿಯ ವೆರೋನಿಕಾ ಕಾರ್ನೆಲಿಯೋ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಪ್ಪಿ ಮೂಡುಬೆಳ್ಳೆ ಅವರು ಸಿರಿ ಪಾಡ್ದನದ ಕೆಲ ಪದ್ಯಗಳನ್ನು ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯ್ತು.

೨೦೨೪, ಮಾರ್ಚ್‌ ೮, ಮಹಿಳಾ ಪ್ರಾತಿನಿಧ್ಯ: ಆಶಯ ಮತ್ತು ವಾಸ್ತವ ವಿಷಯದ ಮೇಲೆ ವಿಚಾರ ಸಂಕಿರಣ

ಕ ರಾ ಮ ದೌ ವಿ ಒಕ್ಕೂಟವು ೨೦೨೪ರ ಮಾರ್ಚ್‌ ೮ ರಂದು ಉಡುಪಿಯ ಟೌನ್‌ಹಾಲ್‌ ನ ಸರಸ್ವತಿಬಾಯಿ ರಾಜವಾಡೆ ವೇದಿಕೆಯಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಚೆನ್ನೈನ ವಕೀಲೆ, ಹೋರಾಟಗಾರ್ತಿ, ಬರಹಗಾರ್ತಿ ಎ ಅರುಳ್‌ ಮೌಳಿಯವರು ದಿಕ್ಸೂಚಿ ಭಾಷಣವನ್ನು ಮಾಡಿದರು. ತುಮಕೂರಿನಲ್ಲಿ ಒಕ್ಕೂಟದ ಗೆಳತಿಯರು ಸೇರಿ ಮಾಡಿದ ಕಸೂತಿಯ ಕೌದಿಯನ್ನು ಅವರಿಗೆ ಹೊದಿಸಿ ಬೆಚ್ಚನೆಯ ಪ್ರೀತಿಯನ್ನು ಉಡುಗೊರೆಯಾಗಿ ಕೊಟ್ಟೆವು. ಬ ಹ ರಮಾಕುಮಾರಿಯವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ ʼಬಹುತ್ವದೆಡೆಗೆ ನಮ್ಮ ನಡಿಗೆʼ-ತುಮಕೂರು ಮಹಿಳಾ ಚೈತನ್ಯದಿನದ ನೆನಪಿನ ಹೊತ್ತಗೆ ಬಿಡುಗಡೆಯಾಯಿತು.

ನಮ್ಮ ನಡಿಗೆ ಉಡುಪಿಯೆಡೆಗೆ....

ಎಲ್ಲ ಬನ್ನಿ ಉಡುಪಿಗೆ. ಒಗ್ಗೂಡಿ ನಡೆಯೋಣ, ಪ್ರೀತಿಯಿಂದ ಬಾಳೋಣ, ಸಮಸಮಾಜ ಕಟ್ಟೋಣ. ಮಾರ್ಚ್‌ ೮ ಮತ್ತು ೯, ಬನ್ನಿ ಉಡುಪಿಗೆ, ಮಹಿಳಾ ಚೈತನ್ಯ ದಿನವನ್ನು ಸಂಭ್ರಮಿಸೋಣ

ಒಕ್ಕೂಟದ ಗೆಳತಿಯರು ಕೌದಿ ಹೊಲೆಯುತ್ತ ಹಾಡುತ್ತಾ ಹಂಚಿಕೊಳ್ಳುತ್ತಾ....

ಮಂಗಳೂರಿನ‌‌ ಒಕ್ಕೂಟದ ಸಂಗಾತಿಗಳೆಲ್ಲರೂ ಹಾಗೂ ಸಂವಾದ ಯುವ ‌ಸಂಪನ್ಮೂಲ ಕೇಂದ್ರದ ಯುವ‌ ಒಡನಾಡಿಗಳು ಸೇರಿಕೊಂಡು ಉಡುಪಿ ಮಹಿಳಾ ಸಮಾವೇಶದ ತಯಾರಿ ಭಾಗವಾಗಿ ಕೌದಿ ಹೊಲಿಯುವ ಪ್ರಕ್ರಿಯೆ ನಡೆಸಿದೆವು. ಬಿಸಿಲ ಧಗೆ ಏರುತ್ತಿದ್ದ ಹೊತ್ತಲ್ಲಿ ನಾವೆಲ್ಲ ಹೀಗೆ ಜೊತೆಗೆ ಸೇರಿ ಹಾಡುತ್ತ ಹರಟುತ್ತ ಕೌದಿ ಹೊಲಿಯುವಲ್ಲಿ ತೊಡಗಿಕೊಂಡೆವು. ಹಳೆ ಬೇರು ಹೊಸ ಚಿಗುರು ಎಂಬಂತೆ ಜೊತೆ ಸೇರಿಕೊಂಡು ಮಾತುಕತೆ,ಚರ್ಚೆ, ಹಾಡು ಕವನಗಳು, ಜೊತೆಗೆ ಒಕ್ಕೂಟ ಸಾಗಿ ಬಂದ ಹಾದಿಯ ಅನುಭವ ಹಂಚಿಕೆ, ಹೀಗೆ ಒಟ್ಟು ಪ್ರಕ್ರಿಯೆ ತುಂಬಾ ಆಪ್ತವಾಗಿ ನಡೆಯಿತು. ಕಸೂತಿ ತಿಳಿಯದ ಹೊಸ ಜನರಿಗೂ ಕಸೂತಿ ಹಾಕುವುದನ್ನು ಕಲಿಸುತ್ತ, ಕಲಿಯುತ್ತ ಜೊತೆಯಾದೆವು. ಉಡುಪಿಯ ಮಹಿಳಾ ಸಮಾವೇಶದ ಸಂಭ್ರಮ ಈಗಲೇ ಇಲ್ಲಿ ಕಳೆಗಟ್ಟಿದೆ‌.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದ ಅರಿವಿನ ಪಯಣ

ಮಾರ್ಚ್‌ ೮ ಮತ್ತು ೯ ರಂದು ಉಡುಪಿಯಲ್ಲಿ ನಡೆಯುವ ಮಹಿಳಾ ಚೈತನ್ಯ ದಿನದಲ್ಲಿ ಪಾ‍ಲ್ಗೊಳ್ಳ ಬನ್ನಿ ಪ್ರೀತಿಯಿಂದ ಎಂಬ ಕರೆಯೋಲೆಯೊಂದಿಗೆ ಬೈಂದೂರಿನಲ್ಲಿ ಕರಾಮದೌವಿ ಒಕ್ಕೂಟದ ಗೆಳತಿಯರು ʼಅರಿವಿನ ಪಯಣʼ ಎಂಬ ಲಿಂಗ ಸೂಕ್ಷ್ಮತಾ ಅಭಿಯಾನವನ್ನು ಕೈಗೊಂಡಿದ್ದರು.

ಸೊಲ್ಮೆಲು ಸಿರಿಯ ನಾಡಿಗೆ, ಮೈತ್ರಿಯೆಡೆಗೆ ನಮ್ಮ ನಡಿಗೆ

ಸೊಲ್ಮೆಲು ಸಿರಿಯ ನಾಡಿಗೆ, ಮೈತ್ರಿಯೆಡೆಗೆ ನಮ್ಮ ನಡಿಗೆ, ಅಂತರಾಷ್ರತಿಯ ಮಹಿಳಾ ದಿನಾಚರಣೆ ಅಂಗವಾಗಿ 'ಮಹಿಳಾ ಚೈತನ್ಯ ದಿನ'

ನಾನೂ ರಾಣಿ ಚೆನ್ನಮ್ಮ

ನಾನೂ ರಾಣಿ ಚೆನ್ನಮ್ಮ, ೨೦೦ನೇ ವರ್ಷದ ಆಚರಣೆಯಲ್ಲಿ ನಾವು ೨೪ನೇ ಫೆಬ್ರವರಿ ೨೦೨೪

ಕಲಬುರಗಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು: ಪ್ರೊ. ಸಬಿಹಾ ಭೂಮಿಗೌಡ ಅಭಿನಂದನಾ ಸಮಾರಂಭ

ಮಂಗಳೂರು: ಪ್ರೊ. ಸಬಿಹಾ ಭೂಮಿಗೌಡ ಅಭಿನಂದನಾ ಸಮಾರಂಭ

ಕೋಲಾರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕೋಲಾರ “ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ”