ಮಂಗಳೂರಿನ ಒಕ್ಕೂಟದ ಸಂಗಾತಿಗಳೆಲ್ಲರೂ ಹಾಗೂ ಸಂವಾದ ಯುವ ಸಂಪನ್ಮೂಲ ಕೇಂದ್ರದ ಯುವ ಒಡನಾಡಿಗಳು ಸೇರಿಕೊಂಡು ಉಡುಪಿ ಮಹಿಳಾ ಸಮಾವೇಶದ ತಯಾರಿ ಭಾಗವಾಗಿ ಕೌದಿ ಹೊಲಿಯುವ ಪ್ರಕ್ರಿಯೆ ನಡೆಸಿದೆವು. ಬಿಸಿಲ ಧಗೆ ಏರುತ್ತಿದ್ದ ಹೊತ್ತಲ್ಲಿ ನಾವೆಲ್ಲ ಹೀಗೆ ಜೊತೆಗೆ ಸೇರಿ ಹಾಡುತ್ತ ಹರಟುತ್ತ ಕೌದಿ ಹೊಲಿಯುವಲ್ಲಿ ತೊಡಗಿಕೊಂಡೆವು.
ಹಳೆ ಬೇರು ಹೊಸ ಚಿಗುರು ಎಂಬಂತೆ ಜೊತೆ ಸೇರಿಕೊಂಡು ಮಾತುಕತೆ,ಚರ್ಚೆ, ಹಾಡು ಕವನಗಳು, ಜೊತೆಗೆ ಒಕ್ಕೂಟ ಸಾಗಿ ಬಂದ ಹಾದಿಯ ಅನುಭವ ಹಂಚಿಕೆ, ಹೀಗೆ ಒಟ್ಟು ಪ್ರಕ್ರಿಯೆ ತುಂಬಾ ಆಪ್ತವಾಗಿ ನಡೆಯಿತು.
ಕಸೂತಿ ತಿಳಿಯದ ಹೊಸ ಜನರಿಗೂ ಕಸೂತಿ ಹಾಕುವುದನ್ನು ಕಲಿಸುತ್ತ, ಕಲಿಯುತ್ತ ಜೊತೆಯಾದೆವು. ಉಡುಪಿಯ ಮಹಿಳಾ ಸಮಾವೇಶದ ಸಂಭ್ರಮ ಈಗಲೇ ಇಲ್ಲಿ ಕಳೆಗಟ್ಟಿದೆ.