ಒಕ್ಕೂಟವು ಉಡುಪಿಯಲ್ಲಿ ೨೦೨೪ರ ಮಾರ್ಚ್ ೯ ರಂದು ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಜಾಥಾ ಮತ್ತು ಬೃಹತ್ ಸಾರ್ವಜನಿಕ ಸಮಾವೇಶ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಜಾಥಾ ಮತ್ತು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದವರು ಆಂಧ್ರಪ್ರದೇಶದ ಸಿಕಂದರಾಬಾದ್‌ನ ಡಾ.ಜಿ ವಿ ವೆನ್ನೆಲಾ ಗದ್ದರ್. ಉಡುಪಿಯ ವೆರೋನಿಕಾ ಕಾರ್ನೆಲಿಯೋ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಪ್ಪಿ ಮೂಡುಬೆಳ್ಳೆ ಅವರು ಸಿರಿ ಪಾಡ್ದನದ ಕೆಲ ಪದ್ಯಗಳನ್ನು ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯ್ತು.