ಕ ರಾ ಮ ದೌ ವಿ ಒಕ್ಕೂಟವು ೨೦೨೪ರ ಮಾರ್ಚ್ ೮ ರಂದು ಉಡುಪಿಯ ಟೌನ್‌ಹಾಲ್ ನ ಸರಸ್ವತಿಬಾಯಿ ರಾಜವಾಡೆ ವೇದಿಕೆಯಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಚೆನ್ನೈನ ವಕೀಲೆ, ಹೋರಾಟಗಾರ್ತಿ, ಬರಹಗಾರ್ತಿ ಎ ಅರುಳ್ ಮೌಳಿಯವರು ದಿಕ್ಸೂಚಿ ಭಾಷಣವನ್ನು ಮಾಡಿದರು. ತುಮಕೂರಿನಲ್ಲಿ ಒಕ್ಕೂಟದ ಗೆಳತಿಯರು ಸೇರಿ ಮಾಡಿದ ಕಸೂತಿಯ ಕೌದಿಯನ್ನು ಅವರಿಗೆ ಹೊದಿಸಿ ಬೆಚ್ಚನೆಯ ಪ್ರೀತಿಯನ್ನು ಉಡುಗೊರೆಯಾಗಿ ಕೊಟ್ಟೆವು.
ಬ ಹ ರಮಾಕುಮಾರಿಯವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ ʼಬಹುತ್ವದೆಡೆಗೆ ನಮ್ಮ ನಡಿಗೆʼ-ತುಮಕೂರು ಮಹಿಳಾ ಚೈತನ್ಯದಿನದ ನೆನಪಿನ ಹೊತ್ತಗೆ ಬಿಡುಗಡೆಯಾಯಿತು.