ಸುದ್ದಿಗಳು

ವಿಜಯನಗರ ಜಿಲ್ಲೆಯಲ್ಲಿ ʼನನ್ನ ದೃಷ್ಟಿಯಲ್ಲಿ ಹೆಣ್ಣುʼ ಚಿತ್ರಕಲಾ ಸ್ಪರ್ಧೆ

೨೦೨೫ರ ಮಾರ್ಚ್‌ ೮ ಮತ್ತು ೯ ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಒಕ್ಕೂಟದ ಹದಿಮೂರನೇ ʼಮಹಿಳಾ ಚೈತನ್ಯ ದಿನʼ ನಡೆಯಲಿದ್ದು, ಅದರ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದೇವೆ. ಜಿಲ್ಲೆಯ ಶಾಲಾ ಕಾಲೇಜು ಹಾಸ್ಟೆಲುಗಳಲ್ಲಿ ʼಅರಿವಿನ ಪಯಣʼ ಅಭಿಯಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳಲ್ಲಿ ಮಕ್ಕಳ ಹಕ್ಕುಗಳ ದಿನಾಚರಣೆ ಆಚರಿಸಿದ್ದು, ಹೊಸಪೇಟೆ, ಕೂಡ್ಲಿಗಿ, ಹರಪ್ಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕಿನ ೯ ಶಾಲೆಯ ಒಟ್ಟು ೨೦೦ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದಿನಾಂಕ ೦೩/೦೯/೨೦೨೪ ರಂದು ʼಅರಿವಿನ ಪಯಣʼ (ಯುವಜನರಿಗಾಗಿ ಲಿಂಗಸೂಕ್ಷ್ಮತೆಯ ಕಾರ್ಯಾಗಾರ) ಉದ್ಘಾಟನೆ @ಸರ್ಕಾರಿ ಪದವಿಪೂರ್ವ ಮುನಿಸಿಪಲ್‌ ಕಾಲೇಜು, ಚಿತ್ತವಾಡಿಗಿ, ಹೊಸಪೇಟೆ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ೨೦೨೫ರ ʼಮಹಿಳಾ ಚೈತನ್ಯ ದಿನʼವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಮಕ್ಕಳಿಂದ ಮುದುಕರ ತನಕ ಮನಸ್ಸಿನಾಳದಲ್ಲಿ ಹುದುಗಿರುವ ಲಿಂಗ ತಾರತಮ್ಯದ ಅರಿವನ್ನು ಮೂಡಿಸುವ ʼಅರಿವಿನ ಪಯಣʼ ಎಂಬ ಸರಣಿ ಕಾರ್ಯಕ್ರಮ ಇವುಗಳಲ್ಲಿ ಮುಖ್ಯವಾದುದಾಗಿದೆ. ಇದರ ಉದ್ಘಾಟನೆ ಸೆಪ್ಟೆಂಬರ್‌ ೩, ೨೦೨೪ ರಂದು ಸರ್ಕಾರಿ ಪದವಿಪೂರ್ವ ಮುನಿಸಿಪಲ್‌ ಕಾಲೇಜು, ಚಿತ್ತವಾಡಿಗಿ, ಹೊಸಪೇಟೆಯಲ್ಲಿ ನಡೆಯಲಿದೆ. ನಂತರ ವಿವಿಧ ಶಾಲಾ ಕಾಲೇಜು ಸಮುದಾಯಗಳಲ್ಲಿ ಈ ಕಾರ್ಯಕ್ರಮ ನಿರಂತರ ನಡೆಯುತ್ತಿರುತ್ತದೆ.

೨೦೨೪, ಮಾರ್ಚ್‌ ೯ ರಂದು ಉಡುಪಿಯಲ್ಲಿ ಹಕ್ಕೊತ್ತಾಯ ಜಾಥಾ ಮತ್ತು ಬೃಹತ್‌ ಸಾರ್ವಜನಿಕ ಸಮಾವೇಶ

ಒಕ್ಕೂಟವು ಉಡುಪಿಯಲ್ಲಿ ೨೦೨೪ರ ಮಾರ್ಚ್‌ ೯ ರಂದು ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಜಾಥಾ ಮತ್ತು ಬೃಹತ್‌ ಸಾರ್ವಜನಿಕ ಸಮಾವೇಶ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಜಾಥಾ ಮತ್ತು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದವರು ಆಂಧ್ರಪ್ರದೇಶದ ಸಿಕಂದರಾಬಾದ್‌ನ ಡಾ.ಜಿ ವಿ ವೆನ್ನೆಲಾ ಗದ್ದರ್‌. ಉಡುಪಿಯ ವೆರೋನಿಕಾ ಕಾರ್ನೆಲಿಯೋ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಪ್ಪಿ ಮೂಡುಬೆಳ್ಳೆ ಅವರು ಸಿರಿ ಪಾಡ್ದನದ ಕೆಲ ಪದ್ಯಗಳನ್ನು ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯ್ತು.

೨೦೨೪, ಮಾರ್ಚ್‌ ೮, ಮಹಿಳಾ ಪ್ರಾತಿನಿಧ್ಯ: ಆಶಯ ಮತ್ತು ವಾಸ್ತವ ವಿಷಯದ ಮೇಲೆ ವಿಚಾರ ಸಂಕಿರಣ

ಕ ರಾ ಮ ದೌ ವಿ ಒಕ್ಕೂಟವು ೨೦೨೪ರ ಮಾರ್ಚ್‌ ೮ ರಂದು ಉಡುಪಿಯ ಟೌನ್‌ಹಾಲ್‌ ನ ಸರಸ್ವತಿಬಾಯಿ ರಾಜವಾಡೆ ವೇದಿಕೆಯಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಚೆನ್ನೈನ ವಕೀಲೆ, ಹೋರಾಟಗಾರ್ತಿ, ಬರಹಗಾರ್ತಿ ಎ ಅರುಳ್‌ ಮೌಳಿಯವರು ದಿಕ್ಸೂಚಿ ಭಾಷಣವನ್ನು ಮಾಡಿದರು. ತುಮಕೂರಿನಲ್ಲಿ ಒಕ್ಕೂಟದ ಗೆಳತಿಯರು ಸೇರಿ ಮಾಡಿದ ಕಸೂತಿಯ ಕೌದಿಯನ್ನು ಅವರಿಗೆ ಹೊದಿಸಿ ಬೆಚ್ಚನೆಯ ಪ್ರೀತಿಯನ್ನು ಉಡುಗೊರೆಯಾಗಿ ಕೊಟ್ಟೆವು. ಬ ಹ ರಮಾಕುಮಾರಿಯವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ ʼಬಹುತ್ವದೆಡೆಗೆ ನಮ್ಮ ನಡಿಗೆʼ-ತುಮಕೂರು ಮಹಿಳಾ ಚೈತನ್ಯದಿನದ ನೆನಪಿನ ಹೊತ್ತಗೆ ಬಿಡುಗಡೆಯಾಯಿತು.

ನಮ್ಮ ನಡಿಗೆ ಉಡುಪಿಯೆಡೆಗೆ....

ಎಲ್ಲ ಬನ್ನಿ ಉಡುಪಿಗೆ. ಒಗ್ಗೂಡಿ ನಡೆಯೋಣ, ಪ್ರೀತಿಯಿಂದ ಬಾಳೋಣ, ಸಮಸಮಾಜ ಕಟ್ಟೋಣ. ಮಾರ್ಚ್‌ ೮ ಮತ್ತು ೯, ಬನ್ನಿ ಉಡುಪಿಗೆ, ಮಹಿಳಾ ಚೈತನ್ಯ ದಿನವನ್ನು ಸಂಭ್ರಮಿಸೋಣ

ಒಕ್ಕೂಟದ ಗೆಳತಿಯರು ಕೌದಿ ಹೊಲೆಯುತ್ತ ಹಾಡುತ್ತಾ ಹಂಚಿಕೊಳ್ಳುತ್ತಾ....

ಮಂಗಳೂರಿನ‌‌ ಒಕ್ಕೂಟದ ಸಂಗಾತಿಗಳೆಲ್ಲರೂ ಹಾಗೂ ಸಂವಾದ ಯುವ ‌ಸಂಪನ್ಮೂಲ ಕೇಂದ್ರದ ಯುವ‌ ಒಡನಾಡಿಗಳು ಸೇರಿಕೊಂಡು ಉಡುಪಿ ಮಹಿಳಾ ಸಮಾವೇಶದ ತಯಾರಿ ಭಾಗವಾಗಿ ಕೌದಿ ಹೊಲಿಯುವ ಪ್ರಕ್ರಿಯೆ ನಡೆಸಿದೆವು. ಬಿಸಿಲ ಧಗೆ ಏರುತ್ತಿದ್ದ ಹೊತ್ತಲ್ಲಿ ನಾವೆಲ್ಲ ಹೀಗೆ ಜೊತೆಗೆ ಸೇರಿ ಹಾಡುತ್ತ ಹರಟುತ್ತ ಕೌದಿ ಹೊಲಿಯುವಲ್ಲಿ ತೊಡಗಿಕೊಂಡೆವು. ಹಳೆ ಬೇರು ಹೊಸ ಚಿಗುರು ಎಂಬಂತೆ ಜೊತೆ ಸೇರಿಕೊಂಡು ಮಾತುಕತೆ,ಚರ್ಚೆ, ಹಾಡು ಕವನಗಳು, ಜೊತೆಗೆ ಒಕ್ಕೂಟ ಸಾಗಿ ಬಂದ ಹಾದಿಯ ಅನುಭವ ಹಂಚಿಕೆ, ಹೀಗೆ ಒಟ್ಟು ಪ್ರಕ್ರಿಯೆ ತುಂಬಾ ಆಪ್ತವಾಗಿ ನಡೆಯಿತು. ಕಸೂತಿ ತಿಳಿಯದ ಹೊಸ ಜನರಿಗೂ ಕಸೂತಿ ಹಾಕುವುದನ್ನು ಕಲಿಸುತ್ತ, ಕಲಿಯುತ್ತ ಜೊತೆಯಾದೆವು. ಉಡುಪಿಯ ಮಹಿಳಾ ಸಮಾವೇಶದ ಸಂಭ್ರಮ ಈಗಲೇ ಇಲ್ಲಿ ಕಳೆಗಟ್ಟಿದೆ‌.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದ ಅರಿವಿನ ಪಯಣ

ಮಾರ್ಚ್‌ ೮ ಮತ್ತು ೯ ರಂದು ಉಡುಪಿಯಲ್ಲಿ ನಡೆಯುವ ಮಹಿಳಾ ಚೈತನ್ಯ ದಿನದಲ್ಲಿ ಪಾ‍ಲ್ಗೊಳ್ಳ ಬನ್ನಿ ಪ್ರೀತಿಯಿಂದ ಎಂಬ ಕರೆಯೋಲೆಯೊಂದಿಗೆ ಬೈಂದೂರಿನಲ್ಲಿ ಕರಾಮದೌವಿ ಒಕ್ಕೂಟದ ಗೆಳತಿಯರು ʼಅರಿವಿನ ಪಯಣʼ ಎಂಬ ಲಿಂಗ ಸೂಕ್ಷ್ಮತಾ ಅಭಿಯಾನವನ್ನು ಕೈಗೊಂಡಿದ್ದರು.

ಸೊಲ್ಮೆಲು ಸಿರಿಯ ನಾಡಿಗೆ, ಮೈತ್ರಿಯೆಡೆಗೆ ನಮ್ಮ ನಡಿಗೆ

ಸೊಲ್ಮೆಲು ಸಿರಿಯ ನಾಡಿಗೆ, ಮೈತ್ರಿಯೆಡೆಗೆ ನಮ್ಮ ನಡಿಗೆ, ಅಂತರಾಷ್ರತಿಯ ಮಹಿಳಾ ದಿನಾಚರಣೆ ಅಂಗವಾಗಿ 'ಮಹಿಳಾ ಚೈತನ್ಯ ದಿನ'

ನಾನೂ ರಾಣಿ ಚೆನ್ನಮ್ಮ

ನಾನೂ ರಾಣಿ ಚೆನ್ನಮ್ಮ, ೨೦೦ನೇ ವರ್ಷದ ಆಚರಣೆಯಲ್ಲಿ ನಾವು ೨೪ನೇ ಫೆಬ್ರವರಿ ೨೦೨೪

ಕಲಬುರಗಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ