ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪ್ರಮುಖ ವಾರ್ಷಿಕ ಚಟುವಟಿಕೆ ಮಹಿಳಾ ದಿನಾಚರಣೆ. ಈ ಮಹಿಳಾ
ದಿನಾಚರಣೆಗೆ ತುಮಕೂರು ವೇದಿಕೆಯಾಗಿದ್ದು ಒಂದು ಬಹಳ ವಿಶೇಷ. ಇದಕ್ಕೆ ಕಾರಣವೇ ತುಮಕೂರಿನ ಅನೇಕ ಮಹಿಳಾ
ಹೋರಾಟಗಾರರು, ಸಾಹಿತಿಗಳು. ಇವರು ಸುಮಾರು ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ.
ಹಾಗಾಗಿಯೇ ಈ ವರ್ಷದ ಇಡೀ ಪಯಣಕ್ಕೆ ಅವರೇ ವೇದಿಕೆಯನ್ನು ಒದಗಿಸಿ, ಅದನ್ನು ಆಗುಮಾಡಲು ಟೊಂಕಕಟ್ಟಿ ನಿಂತರು.