13ರಲ್ಲಿ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಬಿಡಿಬಿಡಿಯಾಗಿ ಮಹಿಳಾ ಸಂಘಟನೆಗಳು ಸ್ಥಳೀಯವಾಗಿ ನಡೆಸುವ ಮಹಿಳಾ ದಿನಾಚರಣೆಗಳ ಅರಿವು ಅನುಭವಗಳು ಏಕಕಾಲದಲ್ಲಿ ಎಲ್ಲರಿಗೂ ಸಂವಹನಗೊಳ್ಳುವುದು ಸಾಧ್ಯವಿರಲಿಲ್ಲ.
ಫ್ರೀಡಂ ಪಾರ್ಕ್ನಿಂದ ಮೆರವಣಿಗೆ ಆರಂಭ, ಮಲ್ಲೇಶ್ವರಂ ಮೈದಾನದಲ್ಲಿ ಮುಕ್ತಾಯ ಬಹಿರಂಗ ಸಮಾವೇಶ. ಭೂಪಾಲ್ ಅನಿಲ ದುರಂತ ಸಂತ್ರಸ್ತರ ಸಂಘಟನೆಯ ರಶೀದಾ ಬಿ ಮತ್ತು ಚಂಪಾದೇವಿ ಶುಕ್ಲಾ ಅವರು ವಿಶೇಷ ಆಹ್ವಾನಿತರಾಗಿ ಬಂದಿದ್ದರು. 2016ರಲ್ಲಿ ವಿಜಯಪುರದಲ್ಲಿ ಸೇರುವ ಘೋಷಣೆ.
‘ಮಹಿಳೆಯರೆ ಒಂದಾಗಿ ಸಮಾನತೆಗೆ ಮುಂದಾಗಿ’ ಘೋಷವಾಕ್ಯದೊಂದಿಗೆ.
ಮಹಿಳಾ ದಿನಾಚರಣೆಗೆ ಮಣಿಪುರದ ‘ಮೀರಾ ಪೈಬಿ’ (ಪಂಜು ಹಿಡಿದ ಮಹಿಳೆಯರು) ಆಂದೋಲನ ಗುಂಪಿನ ಪ್ರತಿನಿಧಿಗಳಾಗಿ ಇಮಾ ನಾನ್ಬಿ, ಚಿತ್ರಾ ಅಹೆಂತಮ್ ಮತ್ತು ರೇಣು ತಕೆಲೆಂಬಂ ಅವರುಗಳು ವಿಶೇಷ ಆಹ್ವಾನಿತರಾಗಿದ್ದರು.