2014 ಮಾರ್ಚ್ 8ರಂದು ಮೈಸೂರಿನ ರಾಮಸ್ವಾಮಿ ವೃತ್ತದಿಂದ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯುವ ಸಮಾವೇಶದ ಸ್ಥಳವಾದ ಬಿ.ವಿ. ಕಾರಂತ ವೇದಿಕೆಯವರೆಗೂ ಮಹಿಳಾ ಒಕ್ಕೂಟಗಳ ಬೃಹತ್ ರಾಲಿ
ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಕರ್ನಾಟಕದ ಮಹಿಳಾ ಹೋರಾಟದ ಮುಂಚೂಣಿಯ ಸೋದರಿಯರಲ್ಲದೆ ಮಣಿಪುರದ ಮೂವರು ಹೋರಾಟಗಾರ್ತಿಯರಿಂದ ಬೆಲೂನು, ದೀಪದ ಬುಟ್ಟಿಯನ್ನು ಹಾರಿಸುವುದರ ಮೂಲಕ ರ್ಯಾಲಿಗೆ ಚಾಲನೆ ನೀಡಲಾಯಿತು.
ಸಮಾವೇಶದ ಕೇಂದ್ರಬಿಂದುಗಳಾಗಿದ್ದವರು ಇಮಾ ಲೋರೆಂಬಮ್ ನಾನ್ಬಿ, ರೇಣು ತಕೆಲೆಂಬಮ್ ಮತ್ತು ಚಿತ್ರಾ ಅಹೆಂತಮ್. ಇಮಾ ಲೋರೆಂಬಮ್ ನಾನ್ಬಿ ಅವರು ಸುದೀರ್ಘವಾಗಿ ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಮಣಿಪುರದ ಮಹಿಳಾ ಹೋರಾಟದ ಗಾಥೆಯನ್ನು ಕಂಚಿನ ಕಂಠದಲ್ಲಿ ನಿರೂಪಿಸಿದರು.
ಈ ಕಾರ್ಯಕ್ರಮ ಕಳೆಗಟ್ಟುವಂತೆ ವಿವಿಧ ಸಂಘಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಮಹಿಳಾ ವಿಷಯ ಸಂಬಂಧಿತ ನೃತ್ಯ, ರೂಪಕ, ಗೀತೆಗಳು ಪ್ರದರ್ಶನಗೊಂಡವು.